ಅಡುಗೆ ಅನಿಲ ಆಧಾರ್ ಇ-ಕೆವೈಸಿ ಕುರಿತು ಸ್ಪಷ್ಟನೆಗಳು , ಈಗ ನಿಮ್ಮ ಅಡುಗೆ ಅನಿಲ ಸಂಪರ್ಕದ ಇ-ಕೆವೈಸಿ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಆಗುತ್ತೆ | Lpg kyc online

ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲರಿಗೂ ಆಧಾರ್ ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದಕ್ಕೆ ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಗ್ರಾಹಕರು ತಮ್ಮ ಸಮಯಕ್ಕೆ ಅನುಗುಣವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಅಥವಾ ಸಿಲಿಂಡರ್ ಮನೆಗೆ ಡೆಲಿವರಿ ಪಡೆಯುವಾಗಲೂ ಇ-ಕೆವೈಸಿ ಮಾಡಿಸಬಹುದು.

WhatsApp Group Join Now
Telegram Group Join Now

ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸಬೇಕು ಎಂಬ ಸುದ್ದಿಯು ಜನರಲ್ಲಿ ಗೊಂದಲ ಮೂಡಿಸಿದೆ. ಈ ಪ್ರಕ್ರಿಯೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂಬ ವದಂತಿಗಳು ಕೂಡ ಹಬ್ಬಿವೆ.

ಈ ಗೊಂದಲಗಳನ್ನು ನಿವಾರಿಸಲು, ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟನೆ ನೀಡಿದೆ. ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಿಲ್ಲ ಎಂದು ತಿಳಿಸಲಾಗಿದೆ.

ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು, ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಆದ್ದರಿಂದ, ನೀವು ಆಧಾರ್ ಇ-ಕೆವೈಸಿ ಮಾಡಿಸಲು ಒತ್ತಡಕ್ಕೆ ಒಳಗಾಗಬೇಡಿ. ನಿಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗೆ ಹೋಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಆಧಾರ್ ಇ-ಕೆವೈಸಿ ಮಾಡಿಸಲು ಎರಡು ಮಾರ್ಗಗಳಿವೆ.

  • ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ
  • ಹೆಲೋ ಬಿಪಿಸಿಎಲ್, ಇಂಡಿಯನ್ ಆಯ್ಲ್ ಒನ್(Indian oil gas) ಮತ್ತು ವಿಟ್ರನ್ ಹೆಚ್‍ಪಿ ಗ್ಯಾಸ್ ಈ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ

ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸಬೇಕಾಗಿದೆ. ಇದನ್ನು ಮಾಡಿಸಲು ಗ್ಯಾಸ್ ಏಜೆನ್ಸಿಗಳಿಗೆ ಹೋಗಬೇಕು. ಅಥವಾ Indian Oil Gas ಮೊಬೈಲ್ ಅಪ್ಲಿಕೇಶನ್‌ನ ಮೂಲಕವೂ ಮಾಡಿಸಬಹುದು.

Indian Oil Gas ಮೊಬೈಲ್ ಅಪ್ಲಿಕೇಶನ್‌ನ ಮೂಲಕ ಇ-ಕೆವೈಸಿ ಮಾಡಿಸುವುದು ಹೇಗೆ?

  1. ಮೊದಲು ನಿಮ್ಮ ಮೊಬೈಲ್ ಫೋನಿಗೆ ಇಂಡಿಯನ್ ಆಯಿಲ್ ಗ್ಯಾಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  2. ಅಪ್ಲಿಕೇಶನ್ ಅನ್ನು ತೆರೆದು, “ಸೈನ್ ಇನ್” ಅಥವಾ “ನೀವು ಹೊಸ ಗ್ರಾಹಕರು” ಆಗಿದ್ದಲ್ಲಿ New user ಮೇಲೆ ಕ್ಲಿಕ್ ಮಾಡಿ.
  3. ನೀವು “ಸೈನ್ ಇನ್” ಆಯ್ಕೆಯನ್ನು ಆರಿಸಿದರೆ, ನಿಮ್ಮ ಗ್ಯಾಸ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ನೀವು “New user” ಆಯ್ಕೆಯನ್ನು ಆರಿಸಿದರೆ, ನಿಮ್ಮ ಹೆಸರು, ವಿಳಾಸ, ಗ್ಯಾಸ್ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ.
  4. “ಪ್ರೋಫೈಲ್” ಆಯ್ಕೆಯನ್ನು ಕ್ಲಿಕ್ ಮಾಡಿ.
  5. “ಕೆವೈಸಿ” ಆಯ್ಕೆಯನ್ನು ಕ್ಲಿಕ್ ಮಾಡಿ.
  6. ನಿಮ್ಮ ಆಧಾರ್ ಕಾರ್ಡ್‌ನ ಫೋಟೋವನ್ನು ಅಪ್‌ಲೋಡ್ ಮಾಡಿ.
  7. “ಸಲ್ಲಿಸು” ಬಟನ್ ಅನ್ನು ಕ್ಲಿಕ್ ಮಾಡಿ.

ಏಕೆ ಇ-ಕೆವೈಸಿ ಅಗತ್ಯ?

ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕಗಳನ್ನು ಹೊಂದಿದ್ದರೆ ಅಥವಾ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಿದ್ದರೆ ಅದನ್ನು ಪತ್ತೆ ಹಚ್ಚಲು ಇ-ಕೆವೈಸಿ ಸಹಾಯ ಮಾಡುತ್ತದೆ. ಇದರಿಂದಾಗಿ, ಸಬ್ಸಿಡಿ ದರದಲ್ಲಿ ಸಿಲಿಂಡರ್‌ಗಳನ್ನು ಅರ್ಹ ಗ್ರಾಹಕರಿಗೆ ಮಾತ್ರ ವಿತರಿಸಲು ಸಾಧ್ಯವಾಗುತ್ತದೆ.

ಇದನ್ನು ಸಹ ಓದಿ: ಕರ್ನಾಟಕದಲ್ಲಿ ಬರ ಪರಿಹಾರ ಘೋಷಣೆ: ರೈತರಿಗೆ 1 ಕಂತಿನಲ್ಲಿ 2000 ರೂಪಾಯಿ.

ಇ-ಕೆವೈಸಿ ಪ್ರಕ್ರಿಯೆ ಹೇಗೆ?

  • ಗ್ರಾಹಕರ ಬೆರಳ ಗುರುತು ಮತ್ತು ಮುಖ ಚಹರೆಗಳನ್ನು ಆಧಾರ್ ಡೇಟಾಬೇಸ್‌ನೊಂದಿಗೆ ಹೋಲಿಸಲಾಗುತ್ತದೆ.
  • ಈ ಪ್ರಕ್ರಿಯೆ ಗ್ಯಾಸ್ ಏಜೆನ್ಸಿಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಮಾಡಬಹುದು.

ಇ-ಕೆವೈಸಿ ಮಾಡದಿದ್ದರೆ ಏನು?

  • ಇ-ಕೆವೈಸಿ ಮಾಡದಿದ್ದರೂ ಅಡುಗೆ ಅನಿಲ ಸಂಪರ್ಕ ಕಡಿತಗೊಳ್ಳುವುದಿಲ್ಲ.
  • ಆದರೆ, ಅರ್ಹರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ವಿತರಣೆ ಸಿಗುವುದಿಲ್ಲ.

ಈ ಗೊಂದಲಗಳನ್ನು ನಿವಾರಿಸಲು, ಸರ್ಕಾರ ಸ್ಪಷ್ಟನೆ ನೀಡಿದೆ. ಇ-ಕೆವೈಸಿ ಮಾಡಿಸಲು ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇ-ಕೆವೈಸಿ ಮಾಡಿಸಬಹುದು.

WhatsApp Group Join Now
Telegram Group Join Now

Leave a comment