ನೀವು ನಿರ್ಮಾಣ ಕೆಲಸ, ಕಟ್ಟಡದ ಕೆಲಸ, ರಸ್ತೆ ನಿರ್ಮಾಣ, ಗೂಡಂಗಡಿ ಕೆಲಸ, ಇಂಥಹ ದುಡಿಯವ ಕೆಲಸಗಳಲ್ಲಿ ತೊಡಗಿ ಸ್ವಂತ ಬದುಕು ಕಟ್ಟಿಕೊಳ್ಳುತ್ತಿದ್ದೀರಾ? ನಿಮ್ಮ ದುಡಿಯುವ ಜೀವನವನ್ನೇ ಸುಧಾರಿಸಿಕೊಳ್ಳಲು ಸರ್ಕಾರ ಕೊಡುವ ಸಹಾಯಧನಗಳು, ಉಚಿತ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳ ಲಾಭ ಪಡೆಯಲು ಕಾರ್ಮಿಕ ಕಾರ್ಡ್ (ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಕಾರ್ಡ್) ನಿಮಗೆ ತುಂಬಾ ಉಪಯುಕ್ತ. ಈ ಕಾರ್ಡ್ ಮಾಡಿಸೋದು ಹೇಗೆ, ಏನೇನು ಬೇಕು ಅಂತ ತಿಳಿದುಕೊಳ್ಳೋಣ.
ಈ ಲೇಖನದಲ್ಲಿ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳೋದು ಹೇಗೆ, ಯಾವ ದಾಖಲೆಗಳು ಬೇಕು ಎಂಬುದನ್ನು ಸರಳವಾಗಿ ವಿವರಿಸಲಿದ್ದೇವೆ.
ಈ ಕಾರ್ಡ್ ಹಲವು ಸವಲತ್ತುಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ, ಅವುಗಳೆಂದರೆ:
- ಆರೋಗ್ಯ ವಿಮೆ: ಈ ಕಾರ್ಡ್ ಇದ್ದರೆ, ನೀವು ಮತ್ತು ನಿಮ್ಮ ಕುಟುಂಬದವರು ಆರೋಗ್ಯ ವಿಮೆಯ ಯೋಜನೆಗಳನ್ನು ಪಡೆಯಬಹುದು.
- ಮಕ್ಕಳ ಶಿಕ್ಷಣ ಸಹಾಯಧನ: ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧನವನ್ನು ಪಡೆಯಲು ಈ ಕಾರ್ಡ್ ಬಳಸಬಹುದು.
- ಇತರೆ ಸವಲತ್ತುಗಳು: ನಿಮ್ಮ ಕಾರ್ಮಿಕ ಕೆಲಸಕ್ಕೆ ಸಂಬಂಧಿಸಿದ ಇತರೆ ಸವಲತ್ತುಗಳನ್ನು ಪಡೆಯಲು ಈ ಕಾರ್ಡ್ ಬಳಸಬಹುದು.
ಇದನ್ನು ಸಹ ಓದಿ:ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ 2024: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಉನ್ನತ ಶಿಕ್ಷಣ ಪಡೆಯಿರಿ!
ನಿಮ್ಮ ಕಾರ್ಮಿಕ ಕಾರ್ಡ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳ ಮೂಲಕ ಪಡೆಯಬಹುದು. ಈ ಎರಡೂ ವಿಧಾನಗಳ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಏನೆಲ್ಲಾ ಬೇಕು?
- ಅರ್ಜಿ ಫಾರಂ: ಕಚೇರಿಯಲ್ಲೇ ಉಚಿತವಾಗಿ ಫಾರಂ ಸಿಗುತ್ತದೆ.
- ಪಾಸ್‌ಪೋರ್ಟ್ ಸೈಜ್ 3 ಫೋಟೋಗಳು
- ನಿಮ್ಮ ಗುರುತು ಪತ್ರ: ಆಧಾರ್ ಕಾರ್ಡ್, ಪಡಿತರ ಕಾರ್ಡ್, ಮತದಾನದ ಗುರುತಿನ ಚೀಟಿ ಇತ್ಯಾದಿ.
- ನಿಮ್ಮ ವಿಳಾಸದ ಪುರಾವೆ: ವಿದ್ಯುತ್ ಬಿಲ್, ರೇಷನ್ ಕಾರ್ಡ್ ಕಾಪಿ ಇತ್ಯಾದಿ.
- ಕೆಲಸದ ಪ್ರಮಾಣ ಪತ್ರ: ನೀವು ಕೆಲಸ ಮಾಡಿದ ಕಂಪನಿ ಅಥವಾ ಗುತ್ತಿಗೆದಾರ ರುಜುವು ನೀಡಬೇಕು. ಫಾರಂ ನಂ. V(A,B,C,D) ರಲ್ಲಿ ಒಂದನ್ನು ಭರ್ತಿ ಮಾಡಿಸಿಕೊಡಬೇಕು.
ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?
ಈಗ ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ನೀವು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
ಆನ್‌ಲೈನ್ ಮೂಲಕ ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಸುವುದು:
- ಇ-ಲೇಬರ್ ಪೋರ್ಟಲ್‌ಗೆ ಭೇಟಿ ನೀಡಿ: https://labouronline.kar.nic.in/ ಅಥವಾ https://shramsuvidha.gov.in/
- “ನೋಂದಣಿ” ಕ್ಲಿಕ್ ಮಾಡಿ ಮತ್ತು ಹೊಸ ಖಾತೆಯನ್ನು ರಚಿಸಿ.
- ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿಳಾಸ ಪುರಾವೆ, ಇತ್ಯಾದಿ).
- ಅಗತ್ಯವಿರುವ ಶುಲ್ಕವನ್ನು ಪಾವತಿಸಿ.
- ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಟ್ರ್ಯಾಕಿಂಗ್ ಸಂಖ್ಯೆಯನ್ನು ಉಳಿಸಿ.

ಆಫ್‌ಲೈನ್ ಮೂಲಕ ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಸುವುದು:
- ನಿಮ್ಮ ನಿವಾಸದ ಹತ್ತಿರದ ಕಾರ್ಮಿಕ ಇಲಾಖೆ ಕಚೇರಿಗೆ ತೆರಳಿ.
- ಅರ್ಜಿ ನಮೂನೆಯನ್ನು ಪಡೆದುಕೊಂಡು, ಅದನ್ನು ತುಂಬಿ.
- ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ರಸೀದಿ ಪಡೆದುಕೊಂಡು, ಅರ್ಜಿಯ ಸ್ಥಿತಿಯನ್ನು ಕಚೇರಿಯಲ್ಲಿಯೇ ತಿಳಿದುಕೊಳ್ಳಿ.
ಇದನ್ನು ಸಹ ಓದಿ:ಶ್ರಮಿಕ ಸುಲಭ್ ಆವಾಸ್ ಯೋಜನೆ: ಬಡತನ ರೇಖೆಗಿಂತ ಕೆಳಗಿನ ಕಾರ್ಮಿಕರಿಗೆ 1.5 ಲಕ್ಷ ರೂ. ನೆರವು
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್ (ಯಾವುದಾದರೂ ಒಂದು)
- ಫೋಟೋ
- ವಿಳಾಸ ಪುರಾವೆ (ವಿದ್ಯುತ್ ಬಿಲ್, ರೇಷನ್ ಕಾರ್ಡ್, ಇತ್ಯಾದಿ)
- ಉದ್ಯೋಗದಾತರ ಪ್ರಮಾಣಪತ್ರ (ಇದ್ದಿದ್ದರೆ)
ಪ್ರಕ್ರಿಯೆ ಹೇಗೆ?
- ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಫಾರಂ ಭರ್ತಿ ಮಾಡಿ ಸಲ್ಲಿಸಿ.
- ನಿಮ್ಮ ಅರ್ಜಿ ಸರಿಯಾಗಿದ್ದರೆ, ಅಧಿಕಾರಿಗಳು ನಿಮ್ಮ ಫೋಟೋ ತೆಗೆದುಕೊಳ್ಳುತ್ತಾರೆ.
- ಕೆಲವೇ ದಿನಗಳಲ್ಲಿ ನಿಮ್ಮ ಕಾರ್ಡ್ ತಯಾರಾಗಿ ನಿಮಗೆ ಸಿಗುತ್ತದೆ.
ಎಷ್ಟು ದಿನಗಳಲ್ಲಿ ಕಾರ್ಡ್ ಸಿಗುತ್ತದೆ?
- ಸಾಮಾನ್ಯವಾಗಿ 30 ದಿನಗಳೊಳಗೆ ನಿಮ್ಮ ಕಾರ್ಡ್ ಸಿದ್ಧವಾಗಿ ನಿಮಗೆ ತಲುಪುತ್ತದೆ.
- ಆದರೆ, ಕೆಲವೊಮ್ಮೆ ದಾಖಲೆಗಳ ಪರಿಶೀಲನೆಗೆ ಹೆಚ್ಚು ಸಮಯ ಬೇಕಾಗಬಹುದು.
ಇದನ್ನು ಸಹ ಓದಿ:1500 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳ ನೇಮಕಾತಿ 2024
ಕಾರ್ಡ್‌ನ ಲಾಭಗಳು:
- ಸರ್ಕಾರದಿಂದ ಸಹಾಯಧನ: ಶಿಕ್ಷಣ, ವೈದ್ಯಕೀಯ ಸೌಲಭ್ಯ, ಮದುವೆ ಧನಸಹಾಯ, ವಿಮಾ ಯೋಜನೆಗಳ ಲಾಭ ಪಡೆಯಲು ಕಾರ್ಡ್ ಅಗತ್ಯ.
- ಉಚಿತ ತರಬೇತಿ: ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಉಚಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಬಹುದು.
- ಕನಿಷ್ಠ ವೇತನ: ನಿಮಗೆ ಕನಿಷ್ಠ ವೇತನ ಸಿಗುತ್ತದೆ ಎಂಬ ಖಾತ್ರಿ.
- ಉದ್ಯೋಗ ಅವಕಾಶಗಳು: ಕಾರ್ಮಿಕ ಇಲಾಖೆ ನಿಮ್ಮ ಕೌಶಲ್ಯಕ್ಕೆ ತಕ್ಕ ಉದ್ಯೋಗಗಳ ಮಾಹಿತಿ ನೀಡುತ್ತದೆ. ನೀವು ಉದ್ಯೋಗ ಮೇಳೆಗೆ ಕಾರ್ಡ್ ಬಹಳ ಉಪಯುಕ್ತ.
- ಕಾನೂನು ರಕ್ಷಣೆ: ಕೆಲಸದ ಸ್ಥಳದಲ್ಲಿ ನಿಮ್ಮ ಹಕ್ಕುಗಳನ್ನು ರಕ್ಷಿಸಲು, ನ್ಯಾಯವಾದ ವೇತನ ಪಡೆಯಲು ಕಾನೂನು ಬೆಂಬಲ ಸಿಗುತ್ತದೆ.
- ಅಪಘಾತ ಸಂದರ್ಭದಲ್ಲಿ: ನಿಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ಸಹಾಯವಾಗುತ್ತದೆ.
ಮುಖ್ಯ ಸಲಹೆಗಳು:
- ಎಲ್ಲಾ ದಾಖಲೆಗಳನ್ನು ಸರಿಯಾಗಿ ಒದಗಿಸಿ.
- ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
- ನಿಮ್ಮ ಅರ್ಜಿಯ ಸ್ಥಿತಿಯನ್ನು ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಅಥವಾ ವೆಬ್‍ಸೈಟ್‍ನಲ್ಲಿ ಪರಿಶೀಲಿಸಿ.
- ನಿಮ್ಮ ಕಾರ್ಡ್ ಸಿದ್ಧವಾದಾಗ ನಿಮಗೆ ಎಸ್‍ಎಂಎಸ್ ಅಥವಾ ಕರೆ ಮೂಲಕ ಸೂಚನೆ ನೀಡಲಾಗುತ್ತದೆ.
ಸಹಾಯ ಬೇಕಾದರೆ:
ಕಾರ್ಮಿಕ ಇಲಾಖೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 155234 ಟೋಲ್ ಫ್ರೀ ಸಂಖ್ಯೆ ಕರೆ ಮಾಡಿ ಅಥವಾ https://labour.karnataka.gov.in/english ವೆಬ್‌ಸೈಟ್‌ಗೆ ಭೇಟಿ ನೀಡಿ. ಅ
ಅಥವಾ ಈ ಕೆಳಗೆ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಮತ್ತು ಅಜಿ೯ ಸಲ್ಲಿಸಿ:
ಹಳೆಯ ಲೇಬರ್ ಕಾರ್ಡ್ ಹೊಸ ಲೇಬರ್ ಕಾರ್ಡ್ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8050045932
ಹೊಸ ಲೇಬರ್ ಕಾರ್ಡ್ ಕಾರ್ಮಿಕರ ಕಾರ್ಡ್ ಗಂಡ ಹೆಂಡತಿ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಮಕ್ಕಳ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ರೇಷನ್ ಕಾರ್ಡ್
ರಿನಿವಲ್ ಸೇಮ್
8050045932
ಕಷ್ಟಪಟ್ಟು ದುಡಿಯುವ ನಿಮ್ಮಂತಹ ಕಾರ್ಮಿಕರಿಗೆ ಬೆಂಬಲವಾಗಿ ನಿಂತಿದೆ ಕಾರ್ಮಿಕ ಕಾರ್ಡ್. ಸರ್ಕಾರದ ಸಹಾಯಧನಗಳು, ಉತ್ತಮ ಉದ್ಯೋಗ ಅವಕಾಶಗಳು, ಕಾನೂನು ರಕ್ಷಣೆ ಅನ್ನೋ ಭದ್ರತೆ ಕೊಡುತ್ತದೆ. ಹಾಗಾಗಿ ವಿಳಂಬ ಮಾಡದೆ ಇಂದೇ ನಿಮ್ಮ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಿ. ದುಡಿಯವ ಕೈಗಳೇ ದೇಶದ ಬೆನ್ನೆಲುಬು, ನಿಮ್ಮ ದುಡಿಮೆಯನ್ನು ಗೌರವಿಸಿ ಸಹಾಯ ನೀಡಲು ಸರ್ಕಾರ ಸದಾ ಸಿದ್ಧವಿದೆ.